College Prayer

ಪ್ರಾರ್ಥನೆ

ಯಂ ಬ್ರಹ್ಮಾವರುಣೇ೦ದ್ರಮರುತಃ ಸ್ತುನ್ವಂತಿ ದಿವ್ಯೈಸ್ತವೈ: |
ವೇದೈಸ್ಸಾಂಗಪದಕ್ರಮೋನಿಷದೈರ್ಗಾಯಂತಿ ಯಂ ಸಾಮಗಾಃ ||
ಧ್ಯಾನವಸ್ಥಿತ-ತದ್ಗತೇನ ಮನಸಾ ಪಶ್ಯ೦ತಿ ಯಂ ಯೋಗಿನಃ |
ಯಸ್ಯಾಂತಂ ನ ವಿದುಸ್ಸುರಾಸುರಗಣಾ: ದೇವಾಯ ತಸ್ಮೈ ನಮಃ ||              ||1||

ನಮಸ್ತೇ ಸತೇ ತೇ ಜಗತ್ಕಾರಣಾಯ |
ನಮಸ್ತೇ ಚಿತೇ ಸರ್ವಲೋಕಾಶ್ರಯಾಯ ||
ನಮೋsದ್ವೈತ ತತ್ವಾಯ ಮುಕ್ತಿಪ್ರದಾಯ |
ನಮೋ ಬ್ರಹ್ಮಣೇ ವ್ಯಾಪಿನೇ ಶಾಶ್ವತಯ ||                                              ||2||

ತ್ವಮೇಕಂ ಶರಣ್ಯಂ ತ್ವಮೇಕಂ ವರೇಣ್ಯಂ |
ತ್ವಮೇಕಂ ಜಗತ್ಪಾಲಕಂ ಸ್ವಪ್ರಕಾಶಂ ||
ತ್ವಮೇಕಂ ಜಗತ್ಕರ್ತ್ರಪಾತ್ರಪ್ರಹರ್ತ್ರ |
ತ್ವಮೇಕಂ ಪರಂ ನಿಶ್ಚಲಂ ನಿರ್ವಿಕಲ್ಪಂ ||                                                 ||3||

ವಯಂ ತ್ವಾಂ ಸ್ಮರಾಮೋ ವಯಂ ತ್ವಾಂ ಭಜಾಮಃ |
ವಯಂ ತ್ವಾಂ ಜಗತ್ಸಾಕ್ಷಿರೂಪಂ ನಮಾಮಃ ||
ಸದೇಕಂ ನಿದಾನಂ ನಿರಾಲಂಬಮೀಶಂ |
ಭವಾಂಬೋಧಿಪೋತಂ ಶರಣ್ಯಂ ವಜ್ರಾಮಃ ||                                         ||4||

ಯೋs೦ತಃ ಪ್ರವಿಶ್ಯ ಮಮ ವಾಚಮಿಮಾಂ ಪ್ರಸ್ತುಪ್ತಾಂ |
ಸಂಜೀವಯತ್ಯಖಿಲಶಕ್ತಿಧರಸ್ಸ್ವಧಾಮ್ನಾ ||
ಅನ್ಯಾ೦ಶ್ಚ ಹಸ್ತಚರಣಶ್ರವಣತ್ವಗಾದೀನ್ |
ಪ್ರಾಣಾನ್ನಮೋ ಭಗವತೇ ಪುರುಷಾಯ ತುಭ್ಯಂ ||                                     ||5||

ತ್ವಮೇವ ಮಾತಾ ಚ ಪಿತಾ ತ್ವಮೇವ |
ತ್ವಮೇವ ಬಂಧುಶ್ಚ ಸಖಾ ತ್ವಮೇವ ||
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ |
ತ್ವಮೇವ ಸರ್ವಂ ಮಮ ದೇವದೇವ ||                                                     ||6||

ಸರ್ವೇಚ ಸುಖಿನಸ್ಸಂತು | ಸರ್ವೇ ಸಂತು ನಿರಾಮಯಃ |
ಸರ್ವೇ ಭದ್ರಾಣಿ ಪಶ್ಚಂತು | ಮಾ ಕಶ್ಚಿದ್ದು:ಖಭಾಗ್ಭವೇತ್                              ||7||

 

ಪ್ರಾರ್ಥನೆಯ ಭಾವಾರ್ಥ

ಯಾವನನ್ನು ಬ್ರಹ್ಮ, ವರುಣ, ಇಂದ್ರ , ರುದ್ರ, ವಾಯು ದೇವತೆಗಳು ದಿವ್ಯವಾದ ಸ್ತೋತ್ರಗಳಿಂದ ಸ್ತುತಿಸುತ್ತಾರೋ, ಸಾಂಗವಾಗಿ ಪದಪಾಠ,ಕ್ರಮಪಾಠ ಹಾಗೂ ಉಪನಿಷತ್ತುಗಳಿಂದ ಕೂಡಿದ ಸಾಮವೇದವನ್ನು ಗಾನ ಮಾಡುವವರು ಯಾವನನ್ನು ಹಾಡುತ್ತಾರೋ,ಧ್ಯಾನದಲ್ಲಿ ನೆಲೆಗೊಂಡು ತಲ್ಲೀನವಾದ ಮನಸ್ಸಿನಿಂದ ಯೋಗಿಗಳು ಯಾವನನ್ನು ಕಾಣುತ್ತಾರೋ, ದೇವ ದಾನವ ಗಣಗಳೂ ಯಾವನ ಎಲ್ಲೆಯನ್ನು ಕಂಡಿಲ್ಲವೋ, ಆ ದೇವನಿಗೆ ನಮಸ್ಕಾರ.   ||1||

ಜಗತ್ತಿಗೆ ಕಾರಣನಾದ, ಸದ್ ವಸ್ತುವಾದ ನಿನಗೆ ನಮಸ್ಕಾರ. ಎಲ್ಲ ಲೋಕಗಳಿಗೂ ಆಶ್ರಯವಾದ ಚೈತನ್ಯವಾದ ನಿನಗೆ ಪ್ರಣಾಮಗಳು. ಮುಕ್ತಿಯನ್ನು ಕೊಡುವ ಅದ್ವೈತ ತತ್ವಕ್ಕೆ ನಮಸ್ಕಾರ. ಎಲ್ಲೆಡೆಯೂ ಇರುವ ಮತ್ತು ಎಂದೆಂದಿಗೂ ಇರುವ ಬ್ರಹ್ಮವಾದ ನಿನಗೆ ನಮಸ್ಕಾರ.   ||2||

ನೀನೊಬ್ಬನೇ ರಕ್ಷಕ, ನೀನೊಬ್ಬನೇ ಶ್ರೇಷ್ಠವಾದವನು. ಸ್ವತಃ ಬೆಳಗುವ ಮತ್ತು ಪ್ರಪಂಚವನ್ನು ಪಾಲಿಸುವವನು ನೀನೊಬ್ಬನೇ. ಜಗತ್ತಿಗೆ ಸೃಷ್ಟಿ , ಸ್ಥಿತಿ, ಲಯಕಾರಕನೂ ನೀನೊಬ್ಬನೇ. ಪರಮವಸ್ತುವೂ  ಅಚಲನೂ, ವಿಕಲ್ಪಗಳಿಲ್ಲದವನೂ ನೀನೊಬ್ಬನೇ.   ||3||

ನಾವು ನಿನ್ನನ್ನು ನೆನೆಯುತ್ತೇವೆ. ನಾವು ನಿನ್ನನು ಭಜಿಸುತ್ತೇವೆ , ಜಗತ್ತೇ ಸಾಕ್ಷಿರೂಪವಗಿರುವಂತಹ ನಿನ್ನನು ನಾವು ನಮಸ್ಕರಿಸುತ್ತೇವೆ. ಶಾಶ್ವತನೂ ಕಾರಣಪುರುಷನೂ, ಯಾವ ಅವಲಂಬವೂ ಬೇಡದಿರವನೂ, ಪ್ರಭುವೂ, ಸಂಸಾರಸಾಗರದ ಹಡಗೂ ಆದ ನಿನ್ನನ್ನು ಶರಣು ಹೋಗುತ್ತೇವೆ.   ||4||

ಯಾವನು ತನ್ನ ಧಾಮದಿಂದ ನನ್ನ ಅಂತಃಕರಣದೊಳಗೆ ಹೊಕ್ಕು, ನಿದ್ರಿಸುತ್ತಿದ್ದ ಈ ವಾಕ್ ಶಕ್ತಿಗೆ ಚೈತನ್ಯ ತುಂಬುತ್ತಾನೋ, ಹಾಗೆಯೇ ನನ್ನ ಕೈ, ಕಾಲು, ಕಿವಿ, ಚರ್ಮ, ಪ್ರಾಣಗಳು ಇವುಗಳಿಗೆ ಸತ್ವ ಕೊಡುತ್ತಾನೋ, ಅಂತಹ ಸ್ವರಶಕ್ತಿಧರನಾದ ಪರಮಪುರುಷ ಭಗವಂತನಾದ ನಿನಗೆ ನಮಸ್ಕಾರ.   ||5||

ನೀನೇ ತಾಯಿ, ನೀನೇ ತಂದೆ, ನೀನೇ ಬಂಧು, ನೀನೇ ಸ್ನೇಹಿತ, ನೀನೇ ವಿದ್ಯೆ , ನೀನೇ ಐಶ್ವರ್ಯ, ದೇವ ದೇವನೇ ನನಗೆ ನೀನೇ ಎಲ್ಲವು ಆಗಿದ್ದೀಯೆ.   ||6||

ಎಲ್ಲರೂ ಸುಖಿಗಳಾಗಿರಲಿ, ಎಲ್ಲರೂ ಆರೋಗ್ಯವಂತರಾಗಿರಲಿ, ಎಲ್ಲರೂ ಶುಭವನ್ನೇ ಕಾಣಲಿ,ಯಾರೂ ದುಃಖಿಗಳಾಗದಿರಲಿ.   ||7||